ನಮ್ಮ ಕುರಿತು

ನಾವು ಯಾರು

ಉದ್ದೇಶ ಮತ್ತು ಕಥೆ

ಯುವಾಬ್ರಿಗೇಡ್ ಸ್ವಯಂ ಸೇವಾ ಸಂಘಟನೆಯಾಗಿದ್ದು ಹಲವು ಆಯಾಮಗಳಲ್ಲಿ ನಿರಂತರವಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ೨೦೧೪ರಲ್ಲಿ ಸ್ವಾಮಿ ವಿವೇಕಾನಂದರ ವಾಣಿಯನ್ನು ಆದರ್ಶವಾಗಿರಿಸಿಕೊಂಡು ಪ್ರಾರಂಭಗೊಂಡ ಯುವಾಬ್ರಿಗೇಡ್ ಇಂದು ರಾಜ್ಯದ ಮೂಲೆ-ಮೂಲೆಗೂ ಹಬ್ಬಿರುವುದಷ್ಟೇ ಅಲ್ಲದೆ, ದೇಶದ ವಿವಿಧೆಡೆ ಸೇವಾ ಕೆಲಸಗಳನ್ನು ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

  • ಯುವಾಬ್ರಿಗೇಡ್ ಕಾರ್ಯಕರ್ತರು ತಮ್ಮ ಊರುಗಳಲ್ಲಿ ಪ್ರತಿ ವಾರ ಒಟ್ಟಿಗೆ ಸೇರಿ ವಿವಿಧ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಾರೆ.
  • ಕಲ್ಯಾಣಿ, ನದಿ, ಸಮುದ್ರ ಹಾಗು ಬೆಟ್ಟ-ಗುಡ್ಡಗಳ ಸ್ವಚ್ಛತೆಯಿಂದ ರಾಷ್ಟ್ರಕ್ಕಾಗಿ ದುಡಿದ ಮಹಾನ್ ಚೇತನಗಳ ಕುರಿತಾದ ಚಿತ್ರ ಪ್ರದರ್ಶನಗಳವರೆಗೂ, ಬೈಕ್ ರ್ಯಾಲಿ ಗಳಿಂದ ವ್ಯಕ್ತಿತ್ವ ವಿಕಾಸ ಕಾರ್ಯಾಗಾರಗಳವರೆಗೂ, ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಸ್ವಚ್ಛತೆಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನದ ಮಾದರಿಗಳನ್ನು ತೋರಿಸಿ ತಿಳಿಸಿಕೊಡುವುದರ ವರೆಗೂ - ದೇಶ ಕಟ್ಟುವಲ್ಲಿ ಉಪಯುಕ್ತವಾದ ಎಲ್ಲ ಕೆಲಸಗಳಲ್ಲೂ ನಮ್ಮ ತಂಡ ತೊಡಗಿಸಿಕೊಂಡಿದೆ.
  • ನಮ್ಮ ಮಾರ್ಗದರ್ಶಕರ ತಂಡ ನವೀನ ಸಮಾಜಮುಖಿ ಯೋಜನೆಗಳನ್ನು ರೂಪಿಸುತ್ತದೆ. ಈ ಕೆಲಸಗಳು ಕಾರ್ಯಕರ್ತರಿಗೆ ನಿಸ್ವಾರ್ಥ ಸೇವೆಯ ತೃಪ್ತಿಯ ಜೊತೆಗೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶಗಳನ್ನು ನೀಡುತ್ತವೆ.
YuvaBrigade community
ನಮ್ಮ ಯೋಜನೆಗಳು

ಕೈ ಹಿಡಿದು ನಡೆಸುವಿರಾ ?

ತಾಯಿ ಭಾರತಿಗೆ ತನು-ಮನ-ಧನ ಸಮರ್ಪಿತ

ಸಾವಿರಾರು ಸ್ವಯಂಸೇವಕರು ಹಾಗು ದಾನಿಗಳೊಂದಿಗೆ ಸಶಕ್ತ ರಾಷ್ಟ್ರ ಹಾಗು ಸದೃಢ ಸಮಾಜದ ನಿರ್ಮಾಣದಲ್ಲಿ ನೀವೂ ತೊಡಗಿಕೊಳ್ಳಿ. ನಾವೆಲ್ಲರೂ ಒಂದೊಂದು ಹೆಜ್ಜೆ ಇಟ್ಟರೆ, ಭಾರತ ಕೋಟಿ ಹೆಜ್ಜೆಗಳ ದಾಪುಗಾಲನ್ನೇ ಇಡಬಲ್ಲದು.

ಏಕೆ ಸ್ವಯಂಸೇವಕರಾಗಬೇಕು?

ಬದಲಾವಣೆಗೆ ನಮ್ಮೊಂದಿಗೆ ನೀವಿರಬೇಕು

YuvaBrigade community
ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯ ನೇರ ಅವಕಾಶ ಮತ್ತು ಅನುಭವಗಳನ್ನು ಪಡೆಯಬಹುದು.
ಪ್ರಶಸ್ತಿಗಳು ಮತ್ತು ಮಾನ್ಯತೆ

ನಮ್ಮನ್ನು ಪ್ರೇರೇಪಿಸುವ ಗೌರವಗಳು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ಸರ್ಕಾರ

2020

ನಾಡಿನಾದ್ಯಂತ ಯುವಾಬ್ರಿಗೇಡ್ ತರುಣರು ಮಾಡಿದ ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ರಾಜ್ಯಸರ್ಕಾರ ನೀಡಿದ ಗೌರವ

ಚಾಣಕ್ಯ ಪ್ರಶಸ್ತಿ

ಚಾಣಕ್ಯ ಪ್ರಶಸ್ತಿ

ಚಾಣಕ್ಯ ವಾರ್ತೆ

2018

ಸ್ವಚ್ಛತೆ, ಕಲ್ಯಾಣಿ ಮತ್ತು ದೇವಾಲಯಗಳ ಪುನರುಜ್ಜೀವನ, ನಾಡಿನ ಪರಂಪರೆಯನ್ನು ಉಳಿಸುವಲ್ಲಿ ಮಾಡಿದ ಪ್ರಯತ್ನ, ಹೀಗೆ ಅನೇಕ ಸಮಾಜಮುಖಿ ಕೆಲಸಗಳಿಗೆ ಯುವಾಬ್ರಿಗೇಡ್‌ಗೆ ಚಾಣಕ್ಯ ಪ್ರಶಸ್ತಿಯನ್ನು ನೀಡಲಾಯ್ತು.

ಮನ್‌ ಕಿ ಬಾತ್‌

ಮನ್‌ ಕಿ ಬಾತ್‌

ಭಾರತ ಸರ್ಕಾರ

2020

ಯುವಾಬ್ರಿಗೇಡ್ ಶ್ರೀರಂಗಪಟ್ಟಣದಲ್ಲಿ 300 ವರ್ಷಗಳ ಹಳೆಯ ಮಂದಿರವನ್ನು ಪುನರುತ್ಥಾನಗೊಳಿಸಿತು. ದೇವಾಲಯದ ಸುತ್ತಲೂ ದಟ್ಟವಾಗಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆಗೆದು, ಬಣ್ಣ ಹಚ್ಚಿ, ಪೂಜೆಯ ವ್ಯವಸ್ಥೆಯನ್ನೂ ಮಾಡಲಾಯ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುವಾಬ್ರಿಗೇಡ್‌ನ ತರುಣರ ಈ ಸಾಹಸವನ್ನು ತಮ್ಮ ಮನ್‌ ಕಿ ಬಾತ್‌ನ 72ನೇ ಆವೃತ್ತಿಯಲ್ಲಿ ಗುರುತಿಸಿ, ಹೊಗಳಿದ್ದರು.

ನಮ್ಮನ್ನು ಸಂಪರ್ಕಿಸಿ

ಬನ್ನಿ ಹೊಸ ನಾಡನ್ನು ಕಟ್ಟೋಣ

ಸಂಪರ್ಕ ಮಾಹಿತಿ

2ನೇ ಫ್ಲೋರ್, ರಮಣಶ್ರೀ ಕಾಂಪ್ಲೆಕ್ಸ್, 10ನೇ ಮೇನ್, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010

+91 63612 97263

ybkarnataka@gmail.com

ಇಂದೇ ಪ್ರಾರಂಭಿಸಿ

ಕೊಟ್ಟವನೇ ಮಹಾ ಶೂರ

ಶಿಕ್ಷಣ, ಸಂಸ್ಕೃತಿ ಮತ್ತು ನೇತೃತ್ವದ ಮೂಲಕ ಶಕ್ತಿಶಾಲಿ ಸಮುದಾಯವನ್ನು ನಿರ್ಮಿಸುವ ಸಾವಿರಾರು ಸ್ವಯಂಸೇವಕರು ಮತ್ತು ಬೆಂಬಲಿಗರೊಂದಿಗೆ ಸೇರಿ.