ಸಮಗ್ರ ಚಿತ್ರಣ

ನಚಿಕೇತ ವಿಭಾಗದ ಕುರಿತು

ಗುರಿಗಳು, ವಿಧಾನ ಮತ್ತು ಈ ಶಾಖೆಯ ಪ್ರಭಾವ

ಶಾಖೆಯ ಪರಿಚಯ

ಯಾವುದನ್ನು ಇಂದು ನಾವು ಸಮಸ್ಯೆ ಎಂದು ಭಾವಿಸುತ್ತಿರುತ್ತೇವೆಯೋ ಅದರ ನಿಜವಾದ ಫಲ ಉಣ್ಣುವುದು ನಾವಲ್ಲ, ನಮ್ಮ ಮುಂದಿನ ಪೀಳಿಗೆಯ ಮಕ್ಕಳು. ಇಂದಂತೂ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಎಲ್ಲ ಅಪಸವ್ಯಗಳ ಪರಿಣಾಮವನ್ನು ಅನುಭವಿಸುತ್ತಿರುವವರು ಅವರುಗಳೇ. ದೊಡ್ಡವರು ಹಾಡುತ್ತಾರೆ, ಮಕ್ಕಳು ಸ್ಟಾರ್ಸಿಂಗರ್ ಆಗಿಬಿಡುತ್ತಾರೆ. ಬಾಲ್ಯದಲ್ಲೇ ವೈಭವವನ್ನು ಕಂಡ ಮಕ್ಕಳು ಸಾಧನೆಯನ್ನು ಮರೆತು ಅಹಂಕಾರದ ಪೂಜಕರಾಗಿಬಿಡುತ್ತಾರೆ. ದೊಡ್ಡವರು ರೀಲ್ ಮಾಡುತ್ತಾರೆ, ಮಕ್ಕಳು ಅದರ ಪ್ರಭಾವದಿಂದ ತಾವೂ ದೊಡ್ಡವರನ್ನು ಅನುಕರಿಸುತ್ತಾರೆ. ಅರಳಬೇಕಾದ ಹೂವು ಬಲುಬೇಗ ಬಾಡಿಹೋಗುತ್ತದೆ. ಈಗಂತೂ ಅಮೇರಿಕಾದಲ್ಲಿ ನಡೆಯುವ ಯಾವುದೋ ಹೋರಾಟ ಇಲ್ಲಿನ ಮಕ್ಕಳನ್ನು ಪ್ರಭಾವಿಸಿಬಿಡುತ್ತದೆ. ಅವರುಗಳನ್ನು ಭಾರತೀಯ ಪರಂಪರೆಯತ್ತ ಸೆಳೆದು ತಂದು ಈ ಸವಾಲುಗಳನ್ನೆದುರಿಸಲು ಸಜ್ಜುಗೊಳಿಸದೇ ಹೋದರೆ ನಾವು ಅನ್ಯಾಯ ಮಾಡಿದಂತೆ. ಈ ಕಾರಣದಿಂದಲೇ ಮಕ್ಕಳಿಗೆ ಶಿಬಿರಗಳನ್ನು ಆಯೋಜಿಸುವ ಅಥವಾ ಶಿಬಿರ ಆಯೋಜಕರನ್ನು ತರಬೇತುಗೊಳಿಸುವ ಪ್ರಯತ್ನ ಆಗಬೇಕಿದೆ. ನಮ್ಮ ಪೂರ್ವಜರ ಸಾಮರ್ಥ್ಯದ ಕುರಿತು ಮತ್ತು ಅವರ ವಿಶ್ವವ್ಯಾಪಕತನದ ಕುರಿತು ಮಕ್ಕಳಿಗೆ ಗೌರವ ಮೂಡುವಂತೆ ನಾವು ತಯಾರು ಮಾಡಬೇಕಿದೆ. ಟಿವಿ, ಮೊಬೈಲುಗಳಲ್ಲಿ ಕಳೆದು ಹೋಗುತ್ತಿರುವ ಈ ಮಕ್ಕಳನ್ನು ನಮ್ಮ ಅಸ್ಮಿತೆಯ ಕ್ಷೇತ್ರಗಳಿಗೆ ಓಯ್ದು ನಿಜವಾದ ದೃಷ್ಟಿಯನ್ನು ಅವರಿಗೆ ನೀಡಬೇಕಿದೆ. ಸಂಸ್ಕಾರವರ್ಗಗಳು ಹೆಚ್ಚುವಂತೆ ಮಾಡಿ ಇಂದಿನ ಪೀಳಿಗೆಗಿಂತಲೂ ಹೆಚ್ಚು ಸದೃಢವಾದ ಮತ್ತು ಸವಾಲುಗಳನ್ನೆದುರಿಸಬಲ್ಲ ಸಮರ್ಥವಾದ ಭವಿಷ್ಯ ಭಾರತವನ್ನು ರೂಪಿಸಲು ಪಣ ತೊಡಬೇಕಿದೆ. ಪುಟ್ಟ ಬಾಲಕನಾಗಿದ್ದರೂ ದಿಟ್ಟತನದಿಂದ ಯಮನನ್ನೂ ಎದುರಿಸಿ ಗೆದ್ದ ನಚಿಕೇತ ನಮಗೆಲ್ಲ ಆದರ್ಶವಾಗಬೇಕಿದ್ದಾನೆ. ಹೀಗಾಗಿಯೇ ಅವನ ಹೆಸರಿನಲ್ಲೇ ಈ ವಿಭಾಗ.

ಉದ್ದೇಶ

ನಾವು ಇಂದಿನ ಮಕ್ಕಳನ್ನು ಭಾರತೀಯ ಪರಂಪರೆಯತ್ತ ಸೆಳೆದು ತಂದು ಈ ಸವಾಲುಗಳನ್ನೆದುರಿಸಲು ಸಜ್ಜುಗೊಳಿಸುವುದು. ಮಕ್ಕಳಿಗೆ ಶಿಬಿರಗಳನ್ನು ಆಯೋಜಿಸುವ ಮತ್ತು ಶಿಬಿರ ಆಯೋಜಕರನ್ನು ತರಬೇತುಗೊಳಿಸುವ ಪ್ರಯತ್ನ ಆಗಬೇಕಿದೆ.

ದೃಷ್ಟಿ

ಇಂದಿನ ಎಐ ಯುಗದಲ್ಲಿ ಇಡೀ ಜಗತ್ತಿಗೇ ಶಾಂತಿಯನ್ನು ನೀಡಬಲ್ಲ ಹಾಗು ಮಾನವನ ಪರಿಪೂರ್ಣ ಬೆಳವಣಿಗೆಗೆ ದಾರಿ ತೋರಬಲ್ಲ ಭಾರತೀಯ ಸಂಸ್ಕೃತಿಯನ್ನು ಇಂದಿನ ಹಾಗು ಮುಂದಿನ ಪೀಳಿಗೆಯವರು ಒಪ್ಪಿ ಅಪ್ಪುವಂತಾಗಬೇಕು.

ಮುಖ್ಯ ವೈಶಿಷ್ಟ್ಯಗಳು

ಉಪಕ್ರಮಗಳು

ಸದೃಢಗೊಳಿಸಲು ಹಾಗು ಪ್ರಭಾವ ಬೀರಲು ಬಳಸುವ ವಿಧಾನಗಳು

ಮಕ್ಕಳ ಶಿಬಿರಗಳು

ಮಕ್ಕಳಿಗೆ ಶಿಬಿರಗಳನ್ನು ಆಯೋಜಿಸುವುದು

ಆಯೋಜಕರ ತರಬೇತಿ

ಶಿಬಿರ ಆಯೋಜಕರನ್ನು ತರಬೇತುಗೊಳಿಸುವುದು

ಪರಂಪರೆ ಅರಿವು

ಮಕ್ಕಳನ್ನು ಭಾರತೀಯ ಪರಂಪರೆಯತ್ತ ಸೆಳೆದು ತರುವುದು

ಸಂಸ್ಕಾರ ವರ್ಗಗಳು

ಸಂಸ್ಕಾರವರ್ಗಗಳು ಹೆಚ್ಚುವಂತೆ ಮಾಡುವುದು

ಕಾರ್ಯಕ್ರಮಗಳು

ಈ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು

ಈ ಶಾಖೆಯ ಅಡಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು