ಅಮೃತ ಕುಂಭ

ಅಮೃತ ಕುಂಭ

ಸಮಗ್ರ ಚಿತ್ರಣ

ಅಮೃತ ಕುಂಭ ವಿಭಾಗದ ಕುರಿತು

ಗುರಿಗಳು, ವಿಧಾನ ಮತ್ತು ಈ ಶಾಖೆಯ ಪ್ರಭಾವ

ಶಾಖೆಯ ಪರಿಚಯ

ಭಾರತವನ್ನು ಕಟ್ಟುವಲ್ಲಿ ಅನೇಕ ಮಹಾಪುರುಷರು ತಮ್ಮ ಬದುಕನ್ನು ಸವೆಸಿದ್ದಾರೆ. ದುರದೃಷ್ಟವೆಂದರೆ ತಮ್ಮ ಇಸಂಗಳಿಗೆ ತಕ್ಕಂತೆ, ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಒಗ್ಗುವಂತೆ ಆ ಮಹಾಪುರುಷರ ಬದುಕನ್ನೂ ವಿಚಾರಧಾರೆಯನ್ನೂ ತಿರುಚುವ ಕೆಲಸ ನಡೆದಿದೆ. ವಾಸ್ತವವಾಗಿ ಇವರೆಲ್ಲ ಅಮೃತಕುಂಭಗಳೇ. ಆ ಕುಂಭದಿಂದ ಹನಿ ಹನಿ ಅಮೃತವನ್ನು ತೆಗೆದು ಸಮಾಜಕ್ಕೆ ಉಣಿಸುವ ಜವಾಬ್ದಾರಿ ನಮ್ಮದ್ದಾಗಬೇಕಿದೆ.

ಉದ್ದೇಶ

ಈ ಹಿರಿಯರನ್ನು ಇಸಂಗಳ ಚೌಕಟ್ಟಿನಿಂದ ಹೊರತಂದು ಅವರ ವಿಚಾರಧಾರೆಗಳನ್ನು ಯಥಾವತ್ತಾಗಿ ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಆಗಬೇಕಿದೆ. ವರ್ಷಕ್ಕೆ ಅಂತಹ ಒಂದು ಅಮೃತಕುಂಭವನ್ನಾದರೂ ಸ್ಪರ್ಶಿಸಿ, ಅಮೃತವನ್ನು ಸಮಾಜಕ್ಕೆ ಉಣಿಸುವ ಹೊಣೆಗಾರಿಕೆ ನಮ್ಮದ್ದು.

ದೃಷ್ಟಿ

ಸಮಾಜದಲ್ಲಿ ಧನಾತ್ಮಕ ಪರಿವರ್ತನೆ ಸೃಷ್ಟಿ ಮಾಡಲು ಕೌಶಲ್ಯ ಮತ್ತು ಸಾಮಾಜಿಕ ಜ್ಞಾನ ಹೊಂದಿರುವ ಯುವ ಪೀಢಿಗಳನ್ನು ರಚಿಸುವುದು.

ಮುಖ್ಯ ವೈಶಿಷ್ಟ್ಯಗಳು

ಉಪಕ್ರಮಗಳು

ಸದೃಢಗೊಳಿಸಲು ಹಾಗು ಪ್ರಭಾವ ಬೀರಲು ಬಳಸುವ ವಿಧಾನಗಳು

ಬೌದ್ಧಿಕ ವರ್ಗಗಳು

ಸಮಾಜದ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ರಾಷ್ಟ್ರ ನಿರ್ಮಾಣದ ಕುರಿತಾದ ಚರ್ಚೆಗಳು

ತರಬೇತಿ ಕಾರ್ಯಾಗಾರಗಳು

ಮುಂದಿನ ಪೀಳಿಗೆಗೆ ಮಹಾಪುರುಷರ ಕುರಿತ ವೈಚಾರಿಕ ತರಬೇತಿ

ಪುಸ್ತಕ ಪ್ರಕಟಣೆ

ಮಹಾಪುರುಷರ ಜೀವನ ಮತ್ತು ವಿಚಾರಧಾರೆಗಳ ಕುರಿತು ಪುಸ್ತಕಗಳನ್ನು ಪ್ರಕಟಿಸುವುದು

ತರುಣರ ಪ್ರವಾಸ

ಮಹಾಪುರುಷರ ಕ್ಷೇತ್ರಗಳಿಗೆ ತರುಣರ ಪ್ರವಾಸ ಆಯೋಜಿಸುವುದು

ಕಾರ್ಯಕ್ರಮಗಳು

ಈ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು

ಈ ಶಾಖೆಯ ಅಡಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು