
ಪ್ರಾರಂಭದ ಕಥನ
2014ರಲ್ಲಿ “ಕೋಟಿ ಮನಸು ಒಂದೇ ಕನಸು” ಎಂಬ ಧ್ಯೇಯ ಹಾಗೂ ವಿಶ್ವಗುರು ಭಾರತದ ಸಂಕಲ್ಪದೊಂದಿಗೆ ಯುವಾ ಬ್ರಿಗೇಡ್ ಆರಂಭವಾಯಿತು. ಕನ್ಯಾಕುಮಾರಿಯ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರು ಕುಳಿತು ಧ್ಯಾನ ಮಾಡಿದ ದಿನದ ಸ್ಮರಣಾರ್ಥ ಡಿಸೆಂಬರ್ 25ರಂದು “ರಾಕ್ ಡೇ” ಆಚರಿಸಿ ರಾಜ್ಯದಾದ್ಯಂತ ಮೊದಲ ಹೆಜ್ಜೆ ಇಟ್ಟಿತು. ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ “ಸಾವಿರದ ವಿವೇಕಾನಂದ” ಅಭಿಯಾನ ನಡೆಸಿ, 2000ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಯುವಕರು ಅವರ ಚಿಂತನೆಗಳನ್ನು ಹರಡಿದರು.





