ನಿಧಿ ಶೋಧ

ನಿಧಿ ಶೋಧ

ಸಮಗ್ರ ಚಿತ್ರಣ

ನಿಧಿ ಶೋಧ ವಿಭಾಗದ ಕುರಿತು

ಗುರಿಗಳು, ವಿಧಾನ ಮತ್ತು ಈ ಶಾಖೆಯ ಪ್ರಭಾವ

ಶಾಖೆಯ ಪರಿಚಯ

ನಿಧಿಯಿಲ್ಲದ ಜಾಗ ಯಾವುದು ಹೇಳಿ? ಮರಳೇ ತುಂಬಿರುವ ಅರೇಬಿಯಾದಲ್ಲೂ ಇಂಧನದ ನಿಧಿ ಇದೆ. ಹಾಗೆಯೇ ಸಾಮಾನ್ಯವೆನಿಸುವ ವ್ಯಕ್ತಿಯೂ ಯಾವುದರದ್ದೋ ಗಣಿಯಾಗಿರುತ್ತಾನೆ. ಆತ ಯಾವುದರ ಒಡೆಯನು ಎಂಬುದನ್ನು ಹುಡುಕಾಡುವುದು ನಮ್ಮ ಪ್ರಯತ್ನ ಅಷ್ಟೇ. ವಿತ್ತ ಕ್ಷೇತ್ರದಲ್ಲಂತೂ ಈ ಹುಡುಕಾಟಕ್ಕೆ ವಿಫುಲ ಅವಕಾಶವಿದೆ. ಕಾರಕೂನರಾಗುವ ಭಾವನೆಯನ್ನು ಪಕ್ಕಕ್ಕಿರಿಸಿ ರಾಷ್ಟ್ರರಥವನ್ನು ಮುನ್ನಡೆಸುವ ಜವಾಬ್ದಾರಿ ಹೊರಬಲ್ಲಂತಹ ತರುಣರನ್ನು ಕಾಲೇಜು ಮಟ್ಟದಲ್ಲೇ ಗುರುತಿಸಬೇಕಾದ ಅವಶ್ಯಕತೆಯಿದೆ. ಹೂಡಿಕೆ ಮಾಡಬಲ್ಲವರನ್ನು ಮತ್ತು ಆಲೋಚನೆಗಳನ್ನು ಸಾಹಸೀ ಸ್ಟಾರ್ಟ್ಅಪ್ ಗಳ ಮೂಲಕ ಕಾರ್ಯರೂಪಕ್ಕೆ ತರುವವರನ್ನು ಬೆಸೆಯಬಲ್ಲ ಸೇತುವಾಗಬೇಕಿದೆ. ಇದು ಈ ವಿಭಾಗದ ಜವಾಬ್ದಾರಿ.

ಉದ್ದೇಶ

ಭಾರತ ಆರ್ಥಿಕವಾಗಿ ವಿಶ್ವದೆತ್ತರಕ್ಕೆ ಬೆಳೆಯಲು ಸಿದ್ಧತೆ ನಡೆಸಿರುವ ಈ ಹೊತ್ತಿನಲ್ಲಿ ಹೆಚ್ಚು ಹೆಚ್ಚು ಆಸ್ತಿ ನಿರ್ಮಾಣದತ್ತ ನಾವು ಗಮನಹರಿಸಬೇಕಾಗಿದೆ. ಸ್ವಂತದ ಆಸ್ತಿಯಲ್ಲ, ರಾಷ್ಟ್ರದ ಆಸ್ತಿಯನ್ನು ಹೆಚ್ಚಿಸುವತ್ತ ದೃಷ್ಟಿ ಹಾಯಿಸಬೇಕಿದೆ.

ದೃಷ್ಟಿ

ಕಂಪನಿಯನ್ನು ಕಟ್ಟುವ ಕನಸು ಕಾಣುತ್ತಿರುವ ವ್ಯಕ್ತಿಯಲ್ಲಿರುವ ಐಡಿಯಾ, ಧೈರ್ಯ, ಹಣ, ಹಾಗೂ ಜ್ಞಾನಗಳೆಂಬ ನಾಲ್ಕು ಆಧಾರ ಸ್ತಂಭಗಳನ್ನು ಗಟ್ಟಿಗೊಳಿಸುವುದು ಮತ್ತು ಹೀಗೆ ಬಂದ ವ್ಯಕ್ತಿಗಳೊಡನೆ ಸದಾ ನಿಲ್ಲುವ ಐದನೆಯ ಆಧಾರ ಸ್ತಂಭವಾಗಿ (ಫಿಫ್ತ್‌ ಪಿಲ್ಲರ್)‌ ಆಗಿ ಕಾರ್ಯ ನಿರ್ವಹಿಸುವುದು.

ಮುಖ್ಯ ವೈಶಿಷ್ಟ್ಯಗಳು

ಉಪಕ್ರಮಗಳು

ಸದೃಢಗೊಳಿಸಲು ಹಾಗು ಪ್ರಭಾವ ಬೀರಲು ಬಳಸುವ ವಿಧಾನಗಳು

ಸ್ಟಾರ್ಟ್ ಅಪ್ ಬೆಂಬಲ

ಸಾಹಸೀ ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ ಕೊಡುವುದು

ಪ್ರತಿಭೆ ಗುರುತಿಸುವಿಕೆ

ರಾಷ್ಟ್ರರಥವನ್ನು ಮುನ್ನಡೆಸುವ ತರುಣರನ್ನು ಗುರುತಿಸುವುದು

ಹೂಡಿಕೆ ಸೇತುವೆ

ಹೂಡಿಕೆದಾರರು ಮತ್ತು ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವವರ ನಡುವೆ ಸೇತುವೆ

ರಾಷ್ಟ್ರ ಆಸ್ತಿ ನಿರ್ಮಾಣ

ರಾಷ್ಟ್ರದ ಆಸ್ತಿಯನ್ನು ಹೆಚ್ಚಿಸುವತ್ತ ಗಮನಹರಿಸುವುದು

ಕಾರ್ಯಕ್ರಮಗಳು

ಈ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು

ಈ ಶಾಖೆಯ ಅಡಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು