ಬ್ರ್ಯಾಂಡ್ ಕನ್ನಡ

ಬ್ರ್ಯಾಂಡ್ ಕನ್ನಡ

ಸಮಗ್ರ ಚಿತ್ರಣ

ಬ್ರ್ಯಾಂಡ್ ಕನ್ನಡ ವಿಭಾಗದ ಕುರಿತು

ಗುರಿಗಳು, ವಿಧಾನ ಮತ್ತು ಈ ಶಾಖೆಯ ಪ್ರಭಾವ

ಶಾಖೆಯ ಪರಿಚಯ

ಕರ್ನಾಟಕ ಹುಟ್ಟಿದ ದಿನದಿಂದಲೂ ರಾಷ್ಟ್ರೀಯತೆಗೆ ಪೂರಕವಾಗಿಯೇ ತನ್ನ ತಾನು ರೂಪಿಸಿಕೊಂಡಿದೆ. ದಕ್ಷಿಣದ ರಾಜ್ಯಗಳೆಲ್ಲ ತಮ್ಮತನವನ್ನು ಕಾಪಾಡಿಕೊಳ್ಳಲು ರಾಷ್ಟ್ರದ ಉನ್ನತಿಯ ಚಿಂತನೆಯನ್ನು ಕೈಬಿಟ್ಟಾಗ ಕರ್ನಾಟಕವೊಂದೇ ಭಿನ್ನವಾಗಿ ನಿಂತದ್ದು. ದಕ್ಷಿಣದ ಇತರೇ ರಾಜ್ಯಗಳು ಯಾವುದಕ್ಕಾಗಿ ಗಲಾಟೆ ಮಾಡುತ್ತದೆಯೋ ಕರ್ನಾಟಕವೆಂದೂ ಅಂತಹ ಕದನಗಳಲ್ಲಿ ತನ್ನ ತಾನು ಜೋಡಿಸಿಕೊಂಡಿಲ್ಲ. ಇದು ನಮ್ಮ ಹಿರಿಯರ, ಪೂರ್ವಜರ ತಪಸ್ಸಿನಿಂದ ನಮಗೆ ಸಿದ್ಧಿಸಿದ ವರ. ಆದರೆ ಈ ಕಾರಣಕ್ಕಾಗಿಯೆ ಅನೇಕ ಬಾರಿ ಕರ್ನಾಟಕ, ಕನ್ನಡಗಳು ಅಸಡ್ಡೆಗೆ ಒಳಗಾಗುತ್ತವೆ. ನಮ್ಮನ್ನು ನಗಣ್ಯವೆಂದು ಭಾವಿಸುವ ರಾಷ್ಟ್ರದ ಇತರೆ ಮಂದಿ ದಕ್ಷಿಣದ ಬೇರೆ ರಾಜ್ಯಗಳನ್ನು ಗೌರವಿಸುತ್ತಾರೆ ಮತ್ತು ಅವರಿಗೆ ಬೇಕಾದ್ದನ್ನು ಕೊಡುವ ಪ್ರಯತ್ನವನ್ನೂ ಮಾಡುತ್ತಾರೆ. ನಮ್ಮ ರಾಷ್ಟ್ರಪ್ರೇಮ ದೂರದಿಂದ ನೋಡುವವರಿಗೆ ಅಭಿಮಾನ ಶೂನ್ಯತೆ ಎನಿಸಿಬಿಡುತ್ತದೆ. ಹೀಗಾಗಿಯೇ ನಮ್ಮನ್ನು ನಾವು ಮತ್ತೊಮ್ಮೆ ಬಲವಾಗಿ ಬ್ರ್ಯಾಂಡ್ ಮಾಡಿಕೊಳ್ಳುವ ಅವಶ್ಯಕತೆಯಿದೆ. ಕನ್ನಡಿಗರ ಸಾಧನೆಗಳು ರಾಷ್ಟ್ರಾದ್ಯಂತ ಗೌರವಕ್ಕೆ ಒಳಗಾಗುವಂತೆ ಮುಂದಿನ ಒಂದು ದಶಕದಲ್ಲಿ ನಾವೆಲ್ಲರೂ ಶ್ರಮ ಹಾಕಬೇಕಿದೆ. ಈ ವಿಭಾಗ ಇದಕ್ಕೆ ಬೇಕಾದ ಆನ್ಲೈನ್, ಆಫ್ಲೈನ್ ಪ್ರಯತ್ನಗಳನ್ನೆಲ್ಲ ಮಾಡುವುದಲ್ಲದೇ ಜಾಗತಿಕ ಮಟ್ಟದಲ್ಲಿ ಕನ್ನಡ ಮತ್ತು ಕರ್ನಾಟಕದ ಗೌರವ ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತದೆ.

ಉದ್ದೇಶ

ನೆಲ, ಜಲ, ಭಾಷೆ, ಸಂಸ್ಕೃತಿ ಇವುಗಳ ಕುರಿತು ನಾಡಿನ ಜನರಿಗೆ ಮನದಟ್ಟು ಮಾಡಿಸುವುದು. ನಾಡಿನ ಅಪರೂಪದ ತಾಣಗಳು, ಸಂಗೀತ, ಶಿಲ್ಪಕಲೆಯಾದಿಯಾಗಿ ಇತರ ಕಲೆಗಳು, ಕನ್ನಡನಾಡಿನ ಶ್ರೇಷ್ಠ ವ್ಯಕ್ತಿಗಳು, ಸಾಹಿತ್ಯ ಕೃತಿಗಳನ್ನೆಲ್ಲ ಜನರಿಗೆ ಪರಿಚಯಿಸುವ ಮತ್ತು ಆ ಕುರಿತು ಆಸಕ್ತಿ ಹುಟ್ಟಿಸುವ ಪ್ರಯತ್ನ

ದೃಷ್ಟಿ

ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ಮೌಲ್ಯದ ಜೊತೆಗೆ ಕರ್ನಾಟಕದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು.

ಮುಖ್ಯ ವೈಶಿಷ್ಟ್ಯಗಳು

ಉಪಕ್ರಮಗಳು

ಸದೃಢಗೊಳಿಸಲು ಹಾಗು ಪ್ರಭಾವ ಬೀರಲು ಬಳಸುವ ವಿಧಾನಗಳು

ಅಪರೂಪದ ತಾಣಗಳು

ಇಲ್ಲಿನ ಅಪರೂಪದ ತಾಣಗಳನ್ನು ಜನರಿಗೆ ಪರಿಚಯಿಸುವುದು

ಕಲೆ ಮತ್ತು ಸಂಗೀತ

ಸಂಗೀತ, ಶಿಲ್ಪಾದಿಯಾಗಿ ಇತರ ಕಲೆಗಳನ್ನು ಪರಿಚಯಿಸುವುದು

ಸಾಹಿತ್ಯ ಪರಿಚಯ

ಇಲ್ಲಿನ ವ್ಯಕ್ತಿಗಳು ಮತ್ತು ಸಾಹಿತ್ಯ ಕೃತಿಗಳನ್ನು ಪರಿಚಯಿಸುವುದು

ಜಾಗತಿಕ ಗೌರವ

ಜಾಗತಿಕ ಮಟ್ಟದಲ್ಲಿ ಕನ್ನಡ ಮತ್ತು ಕರ್ನಾಟಕದ ಗೌರವ ಹೆಚ್ಚಿಸುವುದು

ಕಾರ್ಯಕ್ರಮಗಳು

ಈ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು

ಈ ಶಾಖೆಯ ಅಡಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು