ಧರ್ಮ ಸಂಚಲನ
ಧರ್ಮ ಸಂಚಲನ ವಿಭಾಗದ ಕುರಿತು
ಗುರಿಗಳು, ವಿಧಾನ ಮತ್ತು ಈ ಶಾಖೆಯ ಪ್ರಭಾವ
ಶಾಖೆಯ ಪರಿಚಯ
ಭಾರತ ವಿಕಾಸದ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ನೆನಪಿಡಿ, ವಿಕಾಸದ ಹಾದಿಯಲ್ಲಿ ನಡೆಯುತ್ತಿದ್ದಂತೆ ಮೊದಲು ಹೊಡೆತ ಬೀಳುವುದೇ ಸಂಸ್ಕೃತಿ, ಪರಂಪರೆಗಳ ಮೇಲೆ. ಬದುಕು ಐಷಾರಾಮದತ್ತ ಹೊರಳುತ್ತಿದ್ದಂತೆ ಧರ್ಮ, ಸಂಸ್ಕೃತಿಗಳೆಲ್ಲ ಮಾಯವಾಗುತ್ತವೆ. ಏಕಕಾಲಕ್ಕೆ ಅದು ಗೋಚರಿಸದೇ ಹೋದರೂ ಹಂತ-ಹಂತವಾಗಿ ಕಳೆದು ಹೋಗುವುದರಲ್ಲಿ ಅನುಮಾನವೇ ಇಲ್ಲ. ಹೆಚ್ಚು ಶುಲ್ಕ ತೆತ್ತು ಶಾಲೆಗೆ ಹೋಗುವ ಮಕ್ಕಳು, ಗುರುಗಳ ಮೇಲೆ, ಹಿಂದಿನ ಕಾಲದ ವಿದ್ಯಾರ್ಥಿಗಳಷ್ಟೇ ಗೌರವ ಹೊಂದಿರುತ್ತಾರಾ? ನಮಗೆ ನಾವೇ ಉತ್ತರಿಸಿಕೊಳ್ಳಬೇಕಾದ ಪ್ರಶ್ನೆಯಿದು. ಶ್ರೇಷ್ಠ ರಾಜನೊಬ್ಬ ಭಾರತವನ್ನು ಆಳಿ ಆರ್ಥಿಕವಾಗಿ ಹಾಗು ಸೈನ್ಯದ ದೃಷ್ಟಿಯಿಂದ ಭಾರತವನ್ನು ಬಲಗೊಳಿಸಿದ ನಂತರ ಇದು ಪತನಗೊಂಡಿರುವುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವಲ್ಲ, ಅದರ ಹಿನ್ನೆಲೆಯೂ ಇದೇ. ಹೀಗಾಗಿ ಧರ್ಮ, ಸಂಸ್ಕೃತಿಗಳ ಉಳಿವಿಗಾಗಿ ವಿಕಾಸದ ಈ ಹಾದಿಯಲ್ಲಿ ಒಂದು ಬಲವಾದ ಪ್ರಯತ್ನ ನಡೆಯಲೇಬೇಕಿದೆ. ಧರ್ಮ ಸಂಚಲನವನ್ನುಂಟುಮಾಡಲೇಬೇಕಿದೆ.
ಉದ್ದೇಶ
ರಾಜಕೀಯ ಆಕಾಂಕ್ಷೆಗಳಿಗಾಗಿ ಧರ್ಮವನ್ನೇ ಮರೆತ ಮಂದಿಗೆ ಅದನ್ನು ನೆನಪಿಸಿಕೊಡುವ, ಪ್ರೇಮದ ಅಮಲಿನಲ್ಲಿ ತಂದೆ-ತಾಯಿ, ಮನೆ, ಊರು, ರಾಷ್ಟ್ರವನ್ನೆಲ್ಲ ಮರೆತು ಕುಳಿತಿರುವ, ತಂತ್ರಜ್ಞಾನದ ಛತ್ರಛಾಯೆಯಡಿ ಮೈಚಾಚಿ ಮಲಗಿ ಭಾರತೀಯ ಸಭ್ಯತೆಯನ್ನೇ ಮರೆತಿರುವ ಮಂದಿಗೆ ಜಾಗೃತಿಯನ್ನು ಉಂಟು ಮಾಡುವುದು. ಮಂದಿರಗಳ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು. ಧರ್ಮಕ್ಕಾಗಿ ಕೆಲಸ ಮಾಡುವವರನ್ನು ಗುರುತಿಸಿ, ಗೌರವಿಸುವ ಪ್ರಯತ್ನ. ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗೆ ಪ್ರಯತ್ನಿಸಿ, ಆಧ್ಯಾತ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು.
ದೃಷ್ಟಿ
ಯುವಪೀಳಿಗೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ಮತ್ತು ನೈತಿಕ ಹಾಗೂ ಸಾಂಸ್ಕೃತಿಕವಾಗಿ ಬಲಗೊಂಡಿರುವ ಸಮಾಜದ ನಿರ್ಮಾಣ.
ಉಪಕ್ರಮಗಳು
ಸದೃಢಗೊಳಿಸಲು ಹಾಗು ಪ್ರಭಾವ ಬೀರಲು ಬಳಸುವ ವಿಧಾನಗಳು
ಮಂದಿರಗಳ ಮೌಲ್ಯ
ಮಂದಿರಗಳ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು
ಕಾರ್ಯಕರ್ತರ ಗೌರವ
ಧರ್ಮಕ್ಕಾಗಿ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದು
ಆಧ್ಯಾತ್ಮಿಕ ಜಾಗೃತಿ
ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗೆ ಪ್ರಯತ್ನಿಸುವುದು
ಕ್ಷೇತ್ರ ದರ್ಶನ
ಜಾಗೃತಿಯನ್ನು ಉದ್ದೀಪಿಸಬಲ್ಲ ಜಾಗಗಳಿಗೆ ಕರೆದೊಯ್ಯುವುದು
ಈ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು
ಈ ಶಾಖೆಯ ಅಡಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು