
ಆರ್ಯ-ದ್ರಾವಿಡ : ಸುಳ್ಳು ಹೇಳಿದವರಿಗೆ ಕಪಾಳಮೋಕ್ಷ
ಲೇಖಕರು: ರಾಹುಲ್ ಅಶೋಕ ಹಜಾರೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2021
ಪುಟಗಳು
48
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ವಿವರಣೆ / ಈ ಪುಸ್ತಕದ ಬಗ್ಗೆ
ಇಂದು ಆರ್ಯ ಆಕ್ರಮಣ ವಾದವನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಶ್ರೀಕಾಂತ್ ತಲಗೇರಿ, ಮಿಶೆಲ್ ಡ್ಯಾನಿನೊ, ಕಲ್ಯಾಣ್ ರಾಮನ್, ಡೇವಿಡ್ ಫ್ರಾಲಿ, ನವರತ್ನ ರಾಜಾರಾಂ ಮೊದಲಾದ ವಿದ್ವಾಂಸರು ಇಂದು ಸಾಕಷ್ಟು ಅಧ್ಯಯನ ನಡೆಸಿ ಪುರಾವೆಗಳನ್ನು ಒದಗಿಸಿ ಆರ್ಯರು ಭಾರತೀಯರೆಂಬುದನ್ನು ವಿವಾದಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿದ್ದಾರೆ. ಆದರೆ ಬ್ರಿಟೀಷ್ ಯುಗ ಅದೆಷ್ಟು ಪ್ರಭಾವಿಯಾಗಿತ್ತೆಂದರೆ ಯುನೆಸ್ಕೋ ಪ್ರಕಟಪಡಿಸಿರುವ ಮನುಕುಲದ ಇತಿಹಾಸ ಕೃತಿಯಲ್ಲೂ ಆರ್ಯರನ್ನು ಒಂದು ಜನಾಂಗವೆಂದು, ಇದು ಅನಾಗರಿಕ, ಕ್ರೂರಿಗಳ ಗುಂಪೆಂದು ಉಲ್ಲೇಖಿಸಲಾಗಿದೆ. ಅದನ್ನೇ ಭಾರತದ ಬುದ್ಧಿಜೀವಿಗಳು ಅಂದಿನಿಂದ ಇಂದಿನವರೆಗೂ ಬಡಬಡಾಯಿಸುತ್ತಲೇ ಇದ್ದಾರೆ.
ಬ್ರಿಟೀಷರು ಭಾರತೀಯರನ್ನು ಯಾವ ಯಾವ ರೂಪಗಳಲ್ಲಿ ಒಡೆಯಬೇಕೆಂದು ಚಿಂತಿಸಿದ್ದರೋ ಇವರು ಅದನ್ನು ಶ್ರದ್ಧೆಯಿಂದ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. 75 ವರ್ಷಗಳ ಹಿಂದೆ ಬ್ರಿಟೀಷರು ದೈಹಿಕವಾಗಿ ನಮ್ಮನ್ನು ಬಿಟ್ಟುಹೋದರು ನಿಜ, ಆದರೆ ಮಾನಸಿಕವಾಗಿ ಸಿದ್ದರಾಮಯ್ಯನಂಥವರ ಮೂಲಕ ಇಂದಿಗೂ ಭಾರತವನ್ನು ಆಳುತ್ತಿದ್ದಾರೆ.
ಸತ್ಯವನ್ನು ನಿಮ್ಮೆದುರಿಗಿಡಬೇಕು ಎಂಬ ಪ್ರಯತ್ನದಿಂದಲೇ ಈ ಪುಟ್ಟ ಪುಸ್ತಿಕೆ, ‘ಆರ್ಯ-ದ್ರಾವಿಡ ಸುಳ್ಳು ಹೇಳಿದವರಿಗೆ ಕಪಾಳಮೋಕ್ಷ’