ಎಲ್ಲೆಲ್ಲೂ ಹಿಂದೂ ಸಂಸ್ಕೃತಿ
ಲಭ್ಯವಿರುವ ಭಾಷೆಗಳು: Kannada
ಇತಿಹಾಸ

ಎಲ್ಲೆಲ್ಲೂ ಹಿಂದೂ ಸಂಸ್ಕೃತಿ

ಲೇಖಕರು: ಚಕ್ರವರ್ತಿ ಸೂಲಿಬೆಲೆ

25
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ

ಪ್ರಕಾಶಕರು

ಹೈವೇ ಪಬ್ಲಿಕೇಷನ್ಸ್

ವರ್ಷ

2021

ಪುಟಗಳು

56

ISBN

ಸಂದೇಶ ಕಳುಹಿಸಿ
  • 100% ನಿಜವಾದ ಪುಸ್ತಕ
  • ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ

ವಿವರಣೆ / ಈ ಪುಸ್ತಕದ ಬಗ್ಗೆ

ಭಾರತೀಯ ಸಂಸ್ಕೃತಿಯ ಪ್ರಭಾವ ಜಗತ್ತಿನ ಅನೇಕ ಭಾಗಗಳಲ್ಲಿ ಎಷ್ಟು ಆಳಕ್ಕೆ ಬೇರೂರಿತ್ತೆಂದರೆ ಮುಸಲ್ಮಾನರ ಆಕ್ರಮಣಕ್ಕೊಳಗಾಗಿ ಭಾರತ ಪತರಗುಟ್ಟುವಾಗಲೂ ಬಾಲಿಯಂತಹ ದ್ವೀಪಗಳು ಭಾರತೀಯ ಸಂಸ್ಕೃತಿಗೆ ಬಲವಾಗಿ ಆತುಕೊಂಡಿದ್ದವು. ಭಾರತದಿಂದ ವಿದೇಶಕ್ಕೆ ಹೋದ ಪ್ರತಿಯೊಬ್ಬರೂ ಅಲ್ಲಿನ ಸಂಸ್ಕೃತಿಯಲ್ಲಿ ಹುದುಗಿರುವ ಭಾರತೀಯತೆಯನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಹಾಗೆ ಸುಮ್ಮನೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದರೆ ಜಗತ್ತಿನ ಅತ್ಯಂತ ದೊಡ್ಡ ಮಂದಿರವಿರೋದು ಭಾರತದಲ್ಲಲ್ಲ, ಕಾಂಬೋಡಿಯಾದಲ್ಲಿ! ಥಾಯ್‌ಲ್ಯಾಂಡಿನ ರಾಜನನ್ನು ರಾಮ ಎಂದೇ ಸಂಬೋಧಿಸಲಾಗುತ್ತದೆ. ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ಜಯಕರ್ತಾದ ಅಪಭ್ರಂಶ. ಜಪಾನಿನಲ್ಲಿ ಇಂದಿಗೂ ಹೋಮ ಮಾಡುವ ಪರಂಪರೆ ಇದೆ. ಚೀನಾದಲ್ಲಂತೂ ಬುದ್ಧನ ಪ್ರಭಾವ ತೀವ್ರವಾಗಿ ಕಾಣುತ್ತದೆಯಲ್ಲದೇ ಅವರ ಕುಂಗ್ ಫು ಕಲೆಯ ಮೇಲೆ ಭಾರತದ ಪ್ರಭಾವವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಥಾಯ್‌ಲ್ಯಾಂಡಿನಲ್ಲಿ ನಡೆಯುವ ರಾಮಕಥಾ ಅತ್ಯುತ್ಕೃಷ್ಟವಾದ ನೃತ್ಯ ಪ್ರದರ್ಶನ. ಬಾಲಿಯ ಮಕ್ಕಳು ಆಂಜನೇಯನ ವೇಷ ಧರಿಸುವುದನ್ನು ಸಂಭ್ರಮಿಸುತ್ತಾರೆ. ಎಷ್ಟೆಂದು ಹೇಳೋಣ! ಎಲ್ಲೆಲ್ಲೂ ಭಾರತವೇ ಕಾಣುತ್ತದೆ ಎನ್ನುವುದಷ್ಟೇ ಬಹುಮುಖ್ಯ ಸಂಗತಿ.