
ಗರ್ವದಿಂದ ಹೇಳು - ನಾನು ಹಿಂದೂ
ಲೇಖಕರು: ಚಕ್ರವರ್ತಿ ಸೂಲಿಬೆಲೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2021
ಪುಟಗಳು
56
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ವಿವರಣೆ / ಈ ಪುಸ್ತಕದ ಬಗ್ಗೆ
ಧರ್ಮದ ಕುರಿತ ಸಹಜ ಸಾಮಾನ್ಯ ವಿಚಾರಗಳು ಹಿಂದೂಗಳಿಗೆ ಗೊತ್ತಿಲ್ಲವೆಂಬುದು ಅನೇಕರ ಆಕ್ಷೇಪ. ಇನ್ನೂ ಕೆಲವರಂತೂ ಹಿಂದೂಗಳೇಕೆ ಮುಸಲ್ಮಾನರಂತೆ, ಕ್ರಿಶ್ಚಿಯನ್ನರಂತೆ ವಾರಕ್ಕೊಮ್ಮೆ ಒಂದೆಡೆ ಸೇರುವುದು ಸಾಧ್ಯವಿಲ್ಲ? ಎಂದೆಲ್ಲ ಪ್ರಶ್ನಿಸುತ್ತಾರೆ. ನಮಗೇಕೆ ಒಂದೇ ಧರ್ಮಗ್ರಂಥವಿಲ್ಲ? ಎಂಬುದು ಅನೇಕರ ಗೊಂದಲಕ್ಕೆ ಕಾರಣವಾಗುವ ಪ್ರಶ್ನೆ. ಇವೆಲ್ಲವುಗಳಿಗೂ ಹಿಂದೂಧರ್ಮದ ಮೂಲ ಚಿಂತನೆಯಲ್ಲಿಯೇ ಉತ್ತರವಿದೆ. ಹಿಂದೂಧರ್ಮದ ಸತ್ವಯುತ ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ನಮ್ಮ ಪ್ರಯತ್ನದ ಮುಂದುವರೆದ ಭಾಗವೇ ಈ ಕೃತಿ ಗರ್ವದಿಂದ ಹೇಳು ‘ನಾನು ಹಿಂದೂ’. ನಿಸ್ಸಂಶಯವಾಗಿ ಇದು ಪರಿಪೂರ್ಣವಾದ ಕೃತಿಯೇನೂ ಅಲ್ಲ. ಆದರೆ ತಿಳಿದಿರಲೇಬೇಕಾದ ಮತ್ತು ಮತಾಂತರಿಗಳು ನಮ್ಮನ್ನು ಪ್ರಶ್ನಿಸಿ ಗೊಂದಲಕ್ಕೆ ತಳ್ಳಬಹುದಾದ ಪ್ರಶ್ನೆಗಳಿಗೆ ನಾವೇ ಉತ್ತ- ರಿಸಬಹುದಾದಷ್ಟು ಚಿಂತನೆಯನ್ನು ಹಂಚಿಕೊಳ್ಳುವ ಪ್ರಯತ್ನ. ಈ ಕೃತಿ ಹಿಂದೂಧರ್ಮದ ಕುರಿತಂತೆ ಅರಿಯುವ ಸಣ್ಣದೊಂದು ಆಸಕ್ತಿಯನ್ನು ನಮ್ಮೊಳಗೆ ಹುಟ್ಟುಹಾಕಿದರೆ ಅದೇ ಬೆಟ್ಟದಷ್ಟಾದೀತು.