
ಲಭ್ಯವಿರುವ ಭಾಷೆಗಳು: Kannada
ಇತಿಹಾಸ
ಸ್ವರ್ಗದಿಂದ ನರಕವಾಗಿ ರೂಪಾಂತರ ಹೊಂದಿದ ಕಾಶ್ಮೀರದ ಕಥೆ
ಲೇಖಕರು: ಚಕ್ರವರ್ತಿ ಸೂಲಿಬೆಲೆ
₹30
ಎಲ್ಲಾ ತೆರಿಗೆಗಳನ್ನು ಒಳಗೊಂಡಿದೆ
ಪ್ರಕಾಶಕರು
ಹೈವೇ ಪಬ್ಲಿಕೇಷನ್ಸ್
ವರ್ಷ
2021
ಪುಟಗಳು
64
ISBN
—
- 100% ನಿಜವಾದ ಪುಸ್ತಕ
- ಸುರಕ್ಷಿತ ಪ್ಯಾಕೇಜಿಂಗ್
ಪುಸ್ತಕ ಅವಲೋಕನ
ವಿವರಣೆ / ಈ ಪುಸ್ತಕದ ಬಗ್ಗೆ
ಕಳೆದ ನಾಲ್ಕುನೂರು ವರ್ಷಗಳ ಇತಿಹಾಸವನ್ನು ಅರಿತರೆ ಅಮೇರಿಕಾದ ಒಟ್ಟಾರೆ ಅಧ್ಯಯನ ಮುಗಿದಂತೆ. ಸಾವಿರ ವರ್ಷಗಳ ಇತಿಹಾಸ ತಿಳಿದರೆ ಮುಸಲ್ಮಾನರ ಕುರಿತಂತೆ ಎಲ್ಲವನ್ನೂ ತಿಳಿದುಕೊಂಡಂತೆ. ಆದರೆ, ಈ ದೇಶದ ಇತಿಹಾಸ ಕೆದಕಿದಷ್ಟೂ ಆಳ, ಕಂಡಷ್ಟೂ ವಿಸ್ತಾರ. ಪರಂಪರೆ, ಸಂಸ್ಕೃತಿಗಳು ಇದಕ್ಕೆ ಭಿನ್ನವಲ್ಲ. ನಮ್ಮ ವೇಷ-ಭೂಷ, ಮಾತು-ಕಥೆ ಎಲ್ಲವೂ ಕೂಡ ತನ್ನದೇ ಆದ ಸೂಕ್ಷ್ಮತೆಯನ್ನು ಹೊಂದಿದೆ. ಇವುಗಳನ್ನು ಸಮಗ್ರವಾಗಿ ಅರಿಯುವುದು ಸುಲಭದ ಕೆಲಸವಲ್ಲ ಅಥವಾ ಸಾಮಾನ್ಯನೊಬ್ಬನ ಒಂದು ಜೀವಿತಾವಧಿಯ ಸರಳ ಕಾರ್ಯವೂ ಅಲ್ಲ. ಹಾಗಂತ ತಿಳಿದುಕೊಳ್ಳದೇ ಇದ್ದುಬಿಟ್ಟರಾದೀತೆ? ಕೊನೆಯ ಪಕ್ಷ ಚರ್ಚೆಯಲ್ಲಿರುವ ನಮ್ಮನ್ನು ಹಳಿಯಲು ಬಳಸುವ ವಿಚಾರಗಳ ಕುರಿತಂತಾದರೂ ಸ್ವಲ್ಪ ಆಳಕ್ಕೆ ತಿಳಿದುಕೊಳ್ಳುವುದು ಅಗತ್ಯವಲ್ಲವೇ! ಹಾಗಾಗಿಯೇ ಏಳು ಬೀಳುಗಳನ್ನು ಕಂಡ ಕಾಶ್ಮೀರದ ಇತಿಹಾಸವನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ.